ತಮ್ಮ ಇಡೀ ಬದುಕನ್ನೇ ಭಾಷಾಶಾಸ್ತ್ರದ ಅಧ್ಯಯನ, ಬೋಧನೆ, ಸಂಶೋಧನೆ ಹಾಗೂ ಭಾರತೀಯ ತತ್ವಶಾಸ್ತ್ರಕ್ಕೆ ಮುಡುಪಾಗಿಟ್ಟ ಕರ್ಮಯೋಗಿಯೆಂದು ಪ್ರಸಿದ್ದರಾದ ಡಾ. ಬಿ. ಎನ್. ಕೆ. ಶರ್ಮ ರವರ ಬಾಲ್ಯದ ಹೆಸರು, 'ಭವಾನಿ ನಾರಾಯಣರಾವ್ ಶರ್ಮಾ', ಎಂದು. [೧] 2014-02-04 ವೇಬ್ಯಾಕ್ ಮೆಷಿನ್ ನಲ್ಲಿ.'ಮಧ್ವ ಸಿದ್ಧಾಂತ'ದ ಮಹತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಪ್ರಕಾಂಡ ಪಂಡಿತ. ಶರ್ಮರವರು, ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಾದರೂ, ಹೆಚ್ಚು ಸಮಯ ಕಳೆದದ್ದು ಕರ್ನಾಟಕದಿಂದ ಹೊರಗಡೆಯಲ್ಲಿ. ಶರ್ಮರವರು, ಸಂಸ್ಕೃತ ವಿದ್ವಾಂಸ,ಮೇಧಾವಿ,ಹಾಗೂ ಸುಪ್ರಸಿದ್ಧ ಭಾರತಿಯ ತತ್ವಜ್ಞಾನದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರ ಬಳಿ ಶಿಷ್ಯತ್ವವನ್ನು ಗಳಿಸಿ, ಅವರ ಮಾರ್ಗದರ್ಶನದಲ್ಲಿ ತಮ್ಮ 'ಪಿ.ಎಚ್.ಡಿ.ಪದವಿ'ಯನ್ನು ಗಳಿಸಿದರು. ಮಹತ್ವದ ಗ್ರಂಥಗಳ ಕರ್ತೃವಾಗಿದ್ದಾರೆ. == ವಿಧ್ಯಾಭ್ಯಾಸ, ವೃತ್ತಿಜೀವನ == ಆಗಿನ ಮದ್ರಾಸ್ ನ ಚಿದಂಬರಂನ ಪ್ರಖ್ಯಾತ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಪಾದಾರ್ಪಣೆಮಾಡಿ, ವೃತ್ತಿಜೀವನವನ್ನು ಆರಂಭಿಸಿದ ಶರ್ಮರವರು, 'ತಿರುವೈಯ್ಯಾರಿನ ಸಂಸ್ಕೃತ ಕಾಲೇಜ್' ನಲ್ಲಿ ಪ್ರಾಧ್ಯಾಪಕರಾದರು. ಪಂಜಾಬಿನ ವಿಶ್ವೇಶ್ವರಾನಂದ ವೇದಿಕ್ ರಿಸರ್ಚ್ ಇನ್ಸ್ ಸ್ಟಿ ಟ್ಯೂಟ್ ನ ಸಂಶೋಧಕ ವಿದ್ವಾಂಸ ರಾಗಿ ನಿಯುಕ್ತಿಗೊಂಡರು. 'ಉಡಿಪಿ ಕುಂಟಾ ಕೆನರಾ ಕಾಲೇಜ್' ನ ಪ್ರಾಚಾರ್ಯರಾಗಿ ಸೇವಿಸಲ್ಲಿಸಿದರು. ಬೊಂಬಾಯಿನ 'ಮಹೀಮ್ ಜಿಲ್ಲೆ'ಯ ರೂಪರೇಲ್ ಕಾಲೇಜ್ ನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಾಗಿ ನೇಮಕಗೊಂಡರು. ಸನ್ ೧೯೪೮ ರಲ್ಲಿ ದ. ಸರ್ವೇಪಲ್ಲಿ ರಾಧಾಕೃಷ್ಣರವರ ಮಾರ್ಗದರ್ಶನದಲ್ಲಿ, ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಪಿ.ಎಚ್.ಡಿ. ಗಳಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯ ಭಾಜನರಾಗಿದ್ದಾರೆ. 'ದ್ವೈತ ಸಿದ್ಧಾಂತ'ದ ವಿಭಿನ್ನ ನೆಲೆಗಳನ್ನು ಕುರಿತು ಬೆಳಕು ಚೆಲ್ಲಲು ಪ್ರಯತ್ನಿಸಿದರು. == ಮೇರುಕೃತಿಗಳಲ್ಲಿ ಪ್ರಾಮುಖ್ಯವಾದದ್ದು == ' ' ' . ' ಸಂಸ್ಕೃತ ವಲ್ಲದೆ ಆಂಗ್ಲ ಭಾಷೆಯಲ್ಲೂ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಶರ್ಮರವರ ಸಂಸ್ಕೃತ ಪಾಂಡಿತ್ಯ ಪ್ರತಿಭೆ ಮತ್ತು ಸಾಧನೆಗಳನ್ನು ಹಲವಾರು ಶ್ರೇಷ್ಠ ವಿದ್ವಾಂಸರು ಮುಕ್ತ ಕಂಠದಿಂದ ಹೊಗಳಿದ್ದಾರೆ.[೨] == ಉತ್ಕೃಷ್ಟ ಕೃತಿ ರಚನೆಗಳು == ದ್ವೈತ ಸಿದ್ಧಾಂತ ವಿಶ್ಲೇಷಣೆ, ಅತ್ಯುತ್ತಮ ಹಾಗೂ ಮಹತ್ವದ ಸಂಶೋಧನ ಲೇಖಗಳಲ್ಲೊಂದು. ೨೫ ಕ್ಕೂ ಮೇಲ್ಪಟ್ಟು ಕೃತಿ ರಚನೆ, ೧೫೦ ಕ್ಕೂ ಮಿಗಿಲಾದ ಸಂಶೋಧನ ಲೇಖನಗಳು == ಮಾನ ಸನ್ಮಾನಗಳು,ಮತ್ತು ಪ್ರಶಸ್ತಿ ಪುರಸ್ಕಾರಗಳು == ೧೯೬೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ೧೯೯೨ ರಲ್ಲಿ ಭಾರತದ ರಾಷ್ಟ್ರಪತಿಗಳ ವತಿಯಿಂದ ಪ್ರಶಸ್ತಿ ೧೯೯೩ ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ’ಶ್ರೀ ವಿದ್ಯಾಮಾನ್ಯ’ ಪುರಸ್ಕಾರ. ’ಮಹಾಮಹೋಪಾಧ್ಯಾಯ ಪ್ರಶಸ್ತಿ'. == ಉಲ್ಲೇಖಗಳು == ://../.